9 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 9

ಸಂಖ್ಯೆ – 9

ಈ ಸಂಖ್ಯೆಯಲ್ಲಿ ಹುಟ್ಟಿದವರು ಧೈರ್ಯವಂತರು, ಸಾಹಸಿಗಳು, ಯಾರನ್ನು ಗಮನದಲ್ಲಿ ಇಡದೆ ತಮ್ಮದೇ ಆದ ಮಾರ್ಗದಲ್ಲಿ ನಡೆಯುವರು. ಯಾವ ಕೆಲಸ ಕೈಹಿಡಿದರೂ ಯಾರಿಗೂ ಅಂಜದೆ, ಹಿಂದೆ – ಮುಂದೆ ನೋಡದೆ ಆ ಕೆಲಸ ಮುಗಿಯುವವರೆಗೂ ಹಠ ಸಾಧಿಸಿ ಪೂರ್ತಿ ಮಾಡುವರು. ಇವರು ಯಾವ ಅಧಿಕಾರದ ಚುಕ್ಕಾಣಿ ಹಿಡಿದರೂ ತಮ್ಮ ನಿಲುವಿನಲ್ಲಿಯೇ ಅದನ್ನು ಚಲಾಯಿಸುವರು.
ಇವರು ಯಾರಿಗಾದರೂ ಅಭಯ ನೀಡಿದರೆ ಶತಾಯ ಗತಾಯ ಅವರು ಅದನ್ನು ಅವರಿಗೆ ಜಯವಾಗುವಂತೆ ಶ್ರಮಿಸುವರು.
ಇವರು ಎಲ್ಲರನ್ನೂ ತಮ್ಮ ಬಂಧುಗಳೆಂದೇ ನಂಬಿ, ಅವರಿಗೆ ಸಹಾಯ ಮಾಡುವರು. ಕಳಂಕದ ಮನಸ್ಸಿಲ್ಲದವರು.
ಕಲೆಗಳಲ್ಲಿ ಅಭಿರುಚಿ ಹೊಂದಿ ಎಲ್ಲರ ಮುಂದೆಯೂ ದಿಟ್ಟತನದಿಂದ ಪ್ರದರ್ಶನ ನೀಡುವರು.
ಇವರು ಯಾವುದೇ ಸಭೆ, ಸಮಾರಂಭಗಳಲ್ಲಿ ಮಾತನಾಡಲು ಹಿಂಜರಿಯುವುದಿಲ್ಲ.
ಇವರ ಹೆಚ್ಚು ಧೈರ್ಯವೇ ಇವರಿಗೆ ಅಪಾಯ ತರುವ ಸಂಭವ ತೋರುವುದು.