8 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 8

ಸಂಖ್ಯೆ – 8

ಈ ಸಂಖ್ಯೆಯಲ್ಲಿ ಹುಟ್ಟಿದವರು ವಿಚಾರವಂತರು. ಯಾವಾಗಲೂ ಆಲೋಚನಾ ಪರರು. ವೇದಾಂತ ವಿಚಾರದಲ್ಲಿ ಮುಂದುವರೆದವರು. ಆಲೋಚನೆ ಮಾಡಿದರೆ ಅದು ಪೂರ್ಣಫಲ ಕೊಡುವಂತಿರಬೇಕೆಂದು ಒಪ್ಪುವರು.
ಇವರು ನಿಧಾನಿಗಳು, ಸಾವಧಾನಚಿತ್ತರು, ದುಡುಕಿ ಏನನ್ನು ಮಾತನಾಡುವವರಲ್ಲ. ಸದಾ ಜಾಗೃತರಾಗಿರುತ್ತಾರೆ. ಹಣದ ವಿಷಯದಲ್ಲಿ ಹೆಚ್ಚು ಶ್ರೀಮಂತರಾಗದಿದ್ಧರೂ ಬಡವರೇನಲ್ಲ.
ಕೈ ಹಿಡಿದ ಕೆಲಸ ಮುಗಿಸುವವರೆಗೂ ಶ್ರಮಪಟ್ಟು ಮಾಡಿ ಕಡೆಯಲ್ಲಿ ಅದನ್ನು ಒಂದು ಉತ್ತಮ ಫಲ ಕೊಡುವ ರೀತಿಯಲ್ಲಿ ನಿಲ್ಲಿಸುವರು.
ಯಾವ ಸಂಸ್ಥೆಗೆ ಸೇರಿದರೂ ಮೊದಲು ಆ ಸಂಸ್ಥೆಯ ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡು ಅದನ್ನು ಉತ್ತಮವಾಗಿ ಉನ್ನತ ಸ್ಥಿತಿಗೆ ತಂದು ಅದರಿಂದ ಹತ್ತಾರು ಜನರಿಗೆ ಅನುಕೂಲ ಆಗುವಂತೆ ಪ್ರಯತ್ನಿಸುವರು.