Numerology for date of birth 7

7 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 7

ಸಂಖ್ಯೆ – 7

ಜೀವನದಲ್ಲಿ ಇದು ಪ್ರಚಾರತೆ ನೀಡುವುದು, ಯಾವುದೇ ವಿಚಾರವನ್ನು ನಿಖರವಾಗಿ ತಿಳಿಸುವ ಚೈತನ್ಯ ನೀಡುವುದು. ಇವರು ಧರ್ಮದಲ್ಲಿ ಶ್ರದ್ಧೆ ಉಳ್ಳವರು ಹಾಗೂ ಧರ್ಮವನ್ನು ಎತ್ತಿ ಹಿಡಿಯುವ ಗುಣ ಹೊಂದಿರುವುದರಿಂದ ಇವರು ತಪಸ್ವಿಗಳು, ಯಾವಾಗಲೂ ದೇವತಾ ಧ್ಯಾನವನ್ನು ಮಾಡುತ್ತಾ ಯೋಗ ಸಾಧನೆ ಮಾಡುವವರಾಗಿರುತ್ತಾರೆ. ಇವರು ಅನೇಕ ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುತ್ತಾರೆ. ಪ್ರಕೃತಿಯ ಸೌಂದರ್ಯವನ್ನು ತಮ್ಮ ಆಧ್ಯಾತ್ಮಿಕ ವಿಚಾರಕ್ಕೆ ಹೊಂದಿಸಿಕೊಳ್ಳುತ್ತಾರೆ. ಇವರು ಶಾರೀರಿಕ ಶ್ರಮಕ್ಕಿಂತಲೂ ಮಾನಸಿಕ ಚಿಂತನೆಯಿಂದ ಕೂಡಿ ಜೀವಿಸುತ್ತಾರೆ.
ಇದು ಬಹಳ ಉತ್ತಮವಾದ ಸಂಖ್ಯೆ. ಧಾರ್ಮಿಕ, ವೇದಾಂತಗಳಲ್ಲಿ ಇವರು ಅಗ್ರಗಣ್ಯರು. ಪುರಾಣ, ಇತಿಹಾಸ ಕ್ಷೇತ್ರಗಳ ಬಗ್ಗೆ ಹೆಚ್ಚಿನ ವಿಚಾರ ತಿಳಿಯುವ ಕುತೂಹಲಿಗಳಾಗಿರುತ್ತಾರೆ.