6 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 6

ಸಂಖ್ಯೆ – 6

ಈ ಸಂಖ್ಯೆಯಲ್ಲಿ ಹುಟ್ಟಿದವರಿಗೆ ಪ್ರೀತಿ, ಪ್ರೇಮ, ವಿಶ್ವಾಸ ಗಳಲ್ಲಿ ಅತಿ ಹೆಚ್ಚಿನ ನಂಬಿಕೆ ಇರುತ್ತದೆ. ಯಾವಾಗಲೂ ದುಡಿಯುವರು. ಇದು ಕ್ಷಣವೂ ಬಿಡುವಿಲ್ಲದೆ ಇರುತ್ತಾರೆ. ಯಾವಾಗಲೂ ಏನಾದರೊಂದು ಕಲೆ, ಸಾಹಿತ್ಯ ಮತ್ತು ಅಲಂಕಾರಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಇವರು ಜೀವನದಲ್ಲಿ ಎಲ್ಲರನ್ನೂ ಸಮಾನವಂತರನ್ನಾಗಿ ನೋಡುತ್ತಾರೆ.
ಆದರೆ ಜೀವನದಲ್ಲಿ ಇವರು ಒಂಟಿ ಬಾಳು ಪಡೆಯುವರು. ಹಠವಾದಿಗಳು, ಕೈ ಹಿಡಿದ ಕೆಲಸ ಪೂರ್ತಿ ಆಗುವವರೆಗೂ ಕೈ ಬಿಡುವುದಿಲ್ಲ. ಇವರು ಬಾಲ್ಯದಿಂದಲೂ ಕಷ್ಟಪಟ್ಟು ಮುಂದೊರೆಯುವರು. ಇವರಿಗೆ ಜೀವನದಲ್ಲಿ ಹಣದ ಅವಶ್ಯಕತೆ ಹೆಚ್ಚಾಗಿರುತ್ತದೆ.
ಎಷ್ಟೇ ಹಣ ಇದ್ದರೂ, ಸಂಪಾದನೆ ಇದ್ದರೂ ಏನೋ ನೋವು ಇವರನ್ನು ಕಾಡುವುದು.
ಒಂದೊಂದು ಸಲ ತಮ್ಮ ಆಸೆ ನೆರವೇರ ಬೇಕಾದರೆ ಇವರು ಒರಟು ಸ್ವಭಾವ ತೋರಿಸಬೇಕಾಗುವುದು.
ಇವರಿಗೆ ಸಂಸಾರದಲ್ಲಿ ಯಾವುದೋ ನೋವು ಇರುತ್ತದೆ. ಸುಖ-ಶಾಂತಿ ಇರುವುದಿಲ್ಲ.