5 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 5

ಸಂಖ್ಯೆ – 5

ಈ ಸಂಖ್ಯೆಯಲ್ಲಿ ಹುಟ್ಟಿದವರು ವಿಶೇಷ ಬುದ್ಧಿವಂತರು. ಇವರು ದೈವ ವಿಚಾರವನ್ನು ಪ್ರಚಾರ ಮಾಡುವರು. ಯಾವಾಗಲೂ ಲವಲವಿಕೆಯಿಂದ ಕೂಡಿದ ಮನುಷ್ಯರು, ಎಲ್ಲಾ ಕಾರ್ಯದಲ್ಲೂ ಉತ್ಸಾಹಿಗಳು, ಯಾವಾಗಲೂ ಸೋಮಾರಿತನ ಹೊಂದುವುದಿಲ್ಲ, ಏನಾದರೊಂದು ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ.
ಇವರಿಗೆ ದೀರ್ಘಕಾಲದ ದುಡಿಮೆ ಇರಲಾರದು. ಇದರ ಕಾರಣದಿಂದಾಗಿ ಇವರು ಆಗಾಗ ಉದ್ಯೋಗ ಬದಲಾವಣೆ ಹೊಂದುವರು. ವ್ಯಾಪಾರದಲ್ಲಿ ಏನೇನು ಬದಲಾವಣೆ ಮಾಡುವರು. ತಾವಿರುವ ಮನೆಗೆ ಬದಲಾವಣೆಯನ್ನು ಮಾಡುತ್ತಲೇ ಇರುವರು. ಇವರು ಯಾವ ಬದಲಾವಣೆ ಯನ್ನಾದರೂ ಮಾಡಲು ಇಚ್ಛಿಸಿದರೆ ಅದು ಶೀಘ್ರವಾಗಿ ಆಗಬೇಕು. ಆದರೆ ಒಂದೇ ವೃತ್ತಿ ಬಹಳಕಾಲ ಇವರಿಗೆ ಸಲ್ಲದು.
ಇವರು ಬುಧನ ಶೀಘ್ರ ಗತಿಯಂತೆ ಸಂಪಾದಿಸುವರು. ಆದರೆ ನಿರ್ದಿಷ್ಟವಾದ ಸಂಪಾದನೆ ಇಷ್ಟೇ ಎಂದು ಹೇಳಲಾರರು. ಉಬ್ಬರವಿಳಿತ ಗಳಂತೆ ಸಂಪಾದನೆಯಲ್ಲಿ ಏರುಪೇರು ಇರುತ್ತದೆ. ಇದರಿಂದ ಇವರ ಲೆಕ್ಕಾಚಾರ ವ್ಯತ್ಯಾಸವಾಗುವ ಕಾರಣದಿಂದ ಒಂದೊಂದು ಸಲ ಹಣದ ಕೊರತೆಗೆ ಸಿಲುಕುವರು.