4 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 4

ಸಂಖ್ಯೆ – 4

ಈ ನಾಲ್ಕು ಎಂಬ ಸಂಖ್ಯೆಗೆ ಜಡ ತತ್ವಗಳಲ್ಲಿ ಮನುಷ್ಯತ್ವವನ್ನು ಗುರುತಿಸುವ ಕಲೆ, ಶಕ್ತಿ, ಸಾಧನೆ, ಜೀವನದಲ್ಲಿ ಅಭಿವೃದ್ಧಿ ಹೊಂದುವ ಯೋಗವಿದೆ. ಯಾವಾಗಲೂ ಸತ್ಯಾನ್ವೇಷಣೆ ಅಥವಾ ದೈವತ್ವವನ್ನು ಪೂರ್ಣವಾಗಿ ಅರಿಯುವ ಜ್ಞಾನ ಇದಾಗಿರುತ್ತದೆ. ಜೀವನದಲ್ಲಿ ಏನಾದರೊಂದು ನೋವು ಕಾಣುವುದು. ಆದರೆ ಹಣ ಸಂಪಾದನೆಯ ಕಡೆಯವರಿಗೆ ಯೋಚನೆ ಇರುವುದಿಲ್ಲ.
ಈ ಸಂಖ್ಯೆಯವರು ಸುಂದರ ಮುಖವುಳ್ಳವರು. ಯಾರನ್ನು ಆಕರ್ಷಿಸುವರು. ಯಾವಾಗಲೂ ಏನಾದರೊಂದು ಸಹಾಯದ ಕೆಲಸ ಮಾಡುತ್ತಲೆ ಇರುತ್ತಾರೆ. ಸದಾ ದುಡಿಮೆ ಮಾಡುವುದೇ ಇವರ ಕೆಲಸ.
ಇವರು ವಿಪರೀತ ಬುದ್ಧಿವಂತರು. ಒಂದೊಂದು ಸಲ ಇವರು ಬಹಳ ಕ್ರೂರಿಗಳಾಗುವರು. ಇದಕ್ಕಿದ್ದ ಹಾಗೆ ಏನೋ ಅಚಾತುರ್ಯ ಮಾಡುವರು. ಇವರನ್ನು ಅರ್ಥಮಾಡಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆ.
ಯಾವುದೇ ವಿಚಾರವನ್ನಾದರು ಕುಲಂಕುಷವಾಗಿ ನೋಡಿ ಅದರ ಸಾಧಕ ಬಾಧಕಗಳನ್ನು ತಿಳಿದು ಯಾವ ಅನುಮಾನವೂ ಇಲ್ಲದೆ ಹೇಳುವರು. ಇವರಲ್ಲಿ ಗುಟ್ಟು ನಿಲ್ಲುವುದಿಲ್ಲ.