30 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 30

ಸಂಖ್ಯೆ – 30

ಈ ಸಂಖ್ಯೆಗೆ ಸಂಸಾರವನ್ನು ಕಾಪಾಡುವ ಚಿಂತೆ. ಊಹಾಪೋಹ ಜ್ಞಾನ ಇರುತ್ತದೆ. ಮುಂದಿನ ಭವಿಷ್ಯ ಉತ್ತಮಗೊಳಿಸಲು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತೀರಿ. ಗೃಹಕೃತ್ಯ ವಿಚಾರಗಳಿಗಿಂತಲು ಸಾರ್ವಜನಿಕ ಕ್ಷೇತ್ರದ ಉದ್ಯೋಗದಲ್ಲಿ ಹೆಚ್ಚು ಒಲವು ಮೂಡಿ ಬರುವುದು. ಒಳ್ಳೆಯ ಸ್ನೇಹ ಪಡೆಯುತ್ತೀರಿ. ಕೃಷಿ ಅಭಿವೃದ್ಧಿ ಸ್ತ್ರೀ ಮೂಲಕ ನಿಮಗೆ ಧನ ಲಾಭ ಬರುತ್ತದೆ. ವೇದಾಂತ ಜೀವನಕ್ಕೆ ಅಂಟಿಕೊಳ್ಳುತ್ತೀರಿ. ಭೂಮಿ, ಮನೆ, ಆಸ್ತಿ ಪಡೆಯುತ್ತೀರಿ. ಒಂದೊಂದು ಸಲ ಸಂಸಾರದಲ್ಲಿ ಜಗಳ ಆಡಿದರೆ ಅದು ವಿಪರೀತಕ್ಕೆ ಹೋಗುವುದು. ಆದರೆ ಸಂಸಾರದಲ್ಲಿ ಅಶಾಂತಿ ವಾತಾವರಣದ ನೆರಳು ನಿಮ್ಮ ಹಿಂದಿದೆ.