3 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 3
ಸಂಖ್ಯೆ – 3

ಈ ಸಂಖ್ಯೆಯವರು ವಿಚಾರವಾದಿಗಳು. ಪ್ರತಿ ವಿಚಾರದಲ್ಲಿ ಧರ್ಮ, ನೀತಿ, ನ್ಯಾಯ ತೋರುವರು. ಇವರು ಯಾವಾಗಲೂ ಸತ್ಯವಂತರಾಗಿದ್ದು. ಸತ್ಯ ಧರ್ಮದಿಂದ ಬಂದ ಲಾಭಕ್ಕೆ ತೃಪ್ತಿಪಡುವರು. ದೇವರು, ಗುರು, ಹಿರಿಯರು, ದೇದಾಂತ, ಆತ್ಮಜ್ಞಾನಗಳ ಕಡೆ ಹೆಚ್ಚು ಒಲವು ಇರುತ್ತದೆ.
ಇವರು ದೈವೀಕ ಅಥವಾ ವೇದಾಂತ ಪ್ರಚಾರ, ಹೆಚ್ಚಿನ ಜ್ಞಾನ ಸಾಧನೆಗಾಗಿ ವಿದೇಶ ಪ್ರಯಾಣ ಮಾಡುವವರು. ಯಾರಿಗೂ ತಲೆ ಭಾಗದವರು. ಇವರು ಎಲ್ಲರಿಗೂ ಸಹಾಯ ಮಾಡುವ ಗುಣ ಹೊಂದಿರುವವರು. ಎಲ್ಲರೊಡನೆಯೂ ಬಹು ಬೇಗ ಬೆರೆಯವರು.
ತಂದೆ, ತಾಯಿ, ಮಕ್ಕಳಲ್ಲಿ ಯಾವಾಗಲೂ ಕೂಡಿ ಬಾಳುವರು. ಉದ್ಯೋಗದಲ್ಲಿ ಸ್ವತಂತ್ರರು ವಿಸ್ತಾರವಾದ ವಾತಾವರಣ ಹೊಂದುವರು. ಅಧೃಷ್ಟವು ಇವರನ್ನು ಹುಡುಕಿಕೊಂಡು ಬರುವುದು. ಸಣ್ಣಪುಟ್ಟ ವ್ಯವಹಾರಗಳಿಗೆ ಕೈ ಹಾಕುವುದಿಲ್ಲ. ಧಾರ್ಮಿಕ ಕೆಲಸಗಳನ್ನು ವಶೇಷವಾಗಿ ಮಾಡುವರು.