27 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 27

ಸಂಖ್ಯೆ – 27

ಇತರರಿಗೆ ಸಹಾಯ ಮಾಡಿಯೇ ನೀವು ಜೀವಿಸಬೇಕಾಗುವುದು. ನಿಮಗೆ ಸ್ತ್ರೀಯರಿಂದಲೇ ಅವಮಾನ ಬರುತ್ತದೆ. ಇದರಿಂದ ತಂದೆ ತಾಯಿಗಳಿಂದ ದೂರ ಇರಬೇಕಾಗಬಹುದು.
ನಿಮ್ಮ ಮನೆ, ಭೂಮಿ, ಯಂತ್ರ, ಫ್ಯಾಕ್ಟರಿಗಳಲ್ಲಿ ಕಲಹ ಆಗುತ್ತದೆ ಅಥವಾ ನೀಚ ಜನರಿಂದ ಶಾಂತಿ ಭಂಗ ಆಗಬಹುದು. ಇದರಿಂದ ನಿಮಗೆ ಆಸ್ತಿ ಉಳಿಯದೆ ಸಾಲಗಾರರಾಗಿ ಬಾಳುತ್ತೀರಿ.
ನಿಮಗೆ ದುಡುಕಿನ ಸ್ವಭಾವ ಇದೆ. ನಿಮಗೆ ಇತರರು ಬುದ್ಧಿವಾದ ಹೇಳಿ ನಿಮ್ಮನ್ನು ದಾರಿಗೆ ತರಬೇಕು. ಸ್ವಯಂಕೃತ ಅಪರಾಧ ಮಾಡಿ ದುಃಖ ಹೊಂದುತ್ತೀರಿ.
ನೀವು ಮಾಡುವ ಧಾರ್ಮಿಕ ಕೆಲಸಗಳಿಂದ ನಿಮಗೆ ಅಪಾರ ನಷ್ಟ ಸಂಭವವಾಗುವುದು.
ಶೀಘ್ರವಾಗಿ ಶ್ರೀಮಂತರಾಗುವ ಚಿಂತೆಯಲ್ಲಿ ತಪ್ಪು ಹಾದಿ ಹಿಡಿಯುವಿರಿ. ನೀವು ಸ್ತ್ರೀಯರಿಂದ ಶೀಘ್ರವಾಗಿ ವಂಚಿತರಾಗುತ್ತೀರಿ.