26 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 26

ಸಂಖ್ಯೆ – 26

ಈ ಸಂಖ್ಯೆಯಲ್ಲಿ ಜನಿಸಿದವರು ಜೀವನದಲ್ಲಿ ಚುರುಕುತನ ಇಲ್ಲದವರು. ಮಂದಬುದ್ಧಿಗಳು. ಸೋಮಾರಿಗಳಾಗಿ ಕಾಲ ಕಳೆಯುವಿರಿ.
ಇವರು ಯಾವಾಗಲೂ ಸಾರ್ವಜನಿಕರ ಮಧ್ಯೆ ಇದ್ದರೂ ಸೋಮಾರಿತನ ಇರುವಂತೆ ಹುದ್ದೆ ಹೊರತು ದುಡಿಮೆ ಮಾಡುವವರಲ್ಲ. ಯಾವಾಗಲೂ ಮನರಂಜನೆಗಳಲ್ಲಿಯೇ ಕಾಲ ಕಳೆಯುವರು. ಇವರು ರಸಿಕತೆ ಉಳ್ಳವರು.
ಇವರಿಗೆ ಸ್ವತಂತ್ರವಾಗಿ ಧೈರ್ಯ ಇಲ್ಲ. ದುಡಿಯುವವರಲ್ಲ. ಸದಾ ಸಂಘ ಸಹವಾಸ ಮಾಡಿಕೊಂಡು ಅರ್ಥಹೀನ ಜೀವನ ಬಯಸುವರು.
ಇವರಿಗೆ ಒಳ್ಳೆಯ ಹೆಂಡತಿ, ವಿದ್ಯಾವಂತಳು, ಸ್ಪುರದ್ರೂಪಿ, ವಿವಾಹನಂತರ ಶ್ರೀಮಂತಿಕೆ ತರುವವಳು. ಸಾಮಾನ್ಯವಾಗಿ ಈಕೆಯನ್ನು ಮದುವೆ ಆದ ಮೇಲೆ ಇವರು ವಿದೇಶಕ್ಕೆ ಹೋಗಬಹುದು. ಅಥವಾ ವಿದೇಶದಲ್ಲಿ ಇವರು ಹೆಣ್ಣನ್ನೇ ಇವರು ವಿವಾಹ ಮಾಡಿಕೊಳ್ಳುವರು.