
24 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 24
ಸಂಖ್ಯೆ – 24
ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರೂ ಅಪಜಯ ಹೊಂದುವರು. ತಾವು ಹುಟ್ಟಿದ ಊರಿಗೆ ಕೇಡು ಬಯಸುವರು.
ಇವರು ದುಡಿದು ಹಣ ಸಂಪಾದಿಸುವರು, ಆದರೆ ಸಂಸಾರದಲ್ಲಿ ಇವರು ಕ್ರೂರ ಸ್ವಭಾವದವರು. ಮದುವೆ ಆದ ಮೇಲೆ ಶ್ರೀಮಂತರಾಗುತ್ತಾರೆ. ಆದರೆ ಮನೆ, ಆಸ್ತಿ, ಹಣದ ವಿಚಾರದಲ್ಲಿ ಬಹಳ ದುಃಖ ಅನುಭವಿಸುತ್ತಾರೆ. ಆದರೆ ಇವರು ಯಾವಾಗಲೂ ತಿರುಗಾಟದಲ್ಲಿರುವರು. ವಿದೇಶ ಪ್ರಯಾಣ ಮಾಡುವವರು, ಎಲ್ಲೂ ಹೆಚ್ಚು ಕಾಲ ಒಂದೇ ಕಡೆ ದುಡಿಯುವವರಲ್ಲ.
ಇವರು ಇನ್ನೊಬ್ಬರ ಮಾತಿನಂತೆ ನಡೆದು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಜೀವನದಲ್ಲಿ ಇವರಿಗೆ ಸುಖ, ಶಾಂತಿ, ಸಮಾಧಾನಗಳು, ತೀರ ಅಪರೂಪವಾಗಿರುತ್ತದೆ. ಆದರೆ ಶ್ರಮಕ್ಕೆ ತಕ್ಕ ಪ್ರತಿಫಲ ನಿಮಗೆ ದೊರೆಯುವುದಿಲ್ಲ.
ಇವರು ಅಹಂಕಾರದಿಂದ ವರ್ತಿಸಿ ತಾವು ಕೆಟ್ಟು, ಪತ್ನಿಯನ್ನೂ ಕೆಡುವಂತೆ ಮಾಡುವರು. ದುಡಿದು ಸಂಪಾದಿಸುವರು, ತಮಗಾಗಿ ಏನನ್ನೂ ಮಾಡಿಕೊಳ್ಳುವುದಿಲ್ಲ.