23 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 23

ಸಂಖ್ಯೆ – 23

ಈ ಸಂಖ್ಯೆಯಲ್ಲಿ ಹುಟ್ಟಿದವರಿಗೆ ಶರೀರದಲ್ಲಿ ಏನಾದರೊಂದು ಅಂಗಾಂಗ ಊನವಾಗಲು ಬಾಲ್ಯದಲ್ಲಿ ಏನೋ ಶರೀರ ತೊಂದರೆ ಉಂಟಾಗಿರುತ್ತದೆ.
ಯಾವಾಗಲೂ ಕಾರ್ಯಗಳ ಒತ್ತಡದಿಂದ ಕೂಡಿರುತ್ತಾರೆ. ಸೋಮಾರಿಗಳಾಗಿ ಇರುವುದಿಲ್ಲ. ಇವರು ಮಾತನಾಡಲು ಪ್ರಾರಂಭಿಸಿದರೆ ಕೊನೆ ಮೊದಲು ಇರುವುದಿಲ್ಲ. ಯಾವ ವಿಷಯವನ್ನಾದರೂ ಸರಿ, ಆಧಾರ ಸಹಿತವಾಗಿ ನಿರೂಪಿಸುವರು. ಇತರರನ್ನು ಮಾತಿನಲ್ಲಿ ಮರಳು ಮಾಡುತ್ತಾರೆ.
ಇವರು ಜಲಾಶಯಗಳಲ್ಲಿ ನೀರಿರುವ ಸ್ಥಳಗಳಲ್ಲಿ ತೋಟಗಾರಿಕೆಯಲ್ಲಿ ಹೆಚ್ಚು ಆಸಕ್ತಿವಹಿಸುವರು. ತಂದೆ-ತಾಯಿಗಳಿಂದ ಪ್ರೀತಿಸಲ್ಪಡುವರು. ಆದರೆ ತಂದೆಗಿಂತಲೂ ತಾಯಿಯ ಪ್ರೀತಿ ಕಡಿಮೆ ಎಂದೇ ಹೇಳಬೇಕು.
ಇವರಿಗೆ ಭೂಮಿ, ಮನೆ, ಆಸ್ತಿ, ವಸತಿ ಗೃಹಗಳ ಯೋಗ ಕಡಿಮೆ ಇರುತ್ತದೆ, ಪಿತ್ರಾರ್ಜಿತವಾದ ಆಸ್ತಿ ಇದ್ದರೂ ಕೈ ಸೇರಲಾರದು. ಸ್ವಂತ ಆಸ್ತಿ ಮಾತ್ರ ಉಳಿಯುವುದು.