22 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 22

ಸಂಖ್ಯೆ – 22

ದೀರ್ಘ ದೇಹಿ, ಬುದ್ಧಿವಂತರು, ಎಲ್ಲರನ್ನೂ ಆಕರ್ಷಿಸುವ ಮಾತುಗಾರಿಕೆ, ಸೂಕ್ಷ್ಮ ಗ್ರಹಣೀಂದ್ರಿಯ, ಸ್ಪುರದ್ರೂಪಿ ಆಗುವರು.
ಇವರು ವಿಶ್ವಾಸಿಗಳು, ಗೌರವ ಕೀರ್ತಿಗಾಗಿ ಹೋರಾಡುವರು, ಯಾವಾಗಲೂ ಏನಾದರೊಂದು ಕಾರ್ಯಮಾಡುವ ಹವಣಿಕೆಯಲ್ಲಿರುತ್ತಾರೆ. ದೊಡ್ಡ ದೊಡ್ಡ ವಿಚಾರಗಳನ್ನು ಕೈಗೆತ್ತಿಕೊಂಡು ಅದನ್ನು ಸಾಧಿಸಿ, ಅದರಿಂದ ಕೈತುಂಬಾ ಸಂಪಾದನೆ ಮಾಡಿಕೊಳ್ಳುವರು.
ಇವರು ತಮ್ಮ ಬಂಧು ಜನಗಳಿಗಿಂತಲೂ ಉತ್ತಮ ಮಟ್ಟದಲ್ಲಿರುವರು, ವಿವಾಹ ನಂತರ ಅದೃಷ್ಠಶಾಲಿಗಳಾಗುವರು.
ಬರವಣಿಗೆ ಮುದ್ರಣ, ಪ್ರಚಾರ ಮುಂತಾದವುಗಳಿಂದ ಸಂಪಾದನೆ ಮಾಡುವರು.
ವಿದೇಶಯಾತ್ರೆ ಮಾಡುವರು, ಸದಾ ತಿರುಗಾಟದಲ್ಲಿರುವರು, ಧರ್ಮದಲ್ಲಿ ಶ್ರದ್ಧೆ ಹೊಂದಿರುವರು.
ಭ್ರಾತೃಗಳು ಅದೃಷ್ಟವಂತ ರಾಗಿರುತ್ತಾರೆ. ಅವರಲ್ಲಿ ಒಬ್ಬ ಸಿದ್ಧಪುರುಷನಾಗಬಹುದು.
ಭೂಮಿ, ಮನೆಯ, ಆಸ್ತಿ ಪಡೆಯಬಹುದು, ಆದರೆ, ಭ್ರಾತೃಗಳೇ ವಿರೋಧಿಗಳಾಗುವರು. ದುಡಿಮೆಯಲ್ಲಿ ಸದಾ ಯೋಗ್ಯರು.