Numerology for date of birth 21

21 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 21

ಸಂಖ್ಯೆ – 21

ಈ ಸಂಖ್ಯೆಯಲ್ಲಿ ಯಾವಾಗಲೂ ಎಲ್ಲಾ ಕಾರ್ಯದಲ್ಲೂ ಕರ್ಮನಿರತರಾಗಿ ಶ್ರದ್ಧೆಯಿಂದಲೂ ಭಕ್ತಿಯಿಂದಲೂ ಮಾಡುತ್ತೀರಿ. ವೇದಾಂತ ವಿಚಾರದಲ್ಲಿ ಪ್ರಗತಿ ಇದೆ. ಹಿರಿಯರ ಸಂಯೋಗದಿಂದ ನಿಂತು ಹೋಗಿರುವ ಕೆಲಸ, ಕಾರ್ಯಗಳು ಯಶಸ್ವಿಯಾಗಿ ನಡೆಯುವುವು. ವಿದ್ಯಾನುಕೂಲ, ವಿಶೇಷ ಜ್ಞಾನ ಪಡೆಯುವ ಸಲುವಾಗಿ ದೂರ ಪ್ರಯಾಣ ಮಾಡುತ್ತೀರಿ. ದೇವತಾ ಕಾರ್ಯಗಳನ್ನು ಮಾಡಿಸುವಿರಿ. ಆದರೆ ಜೀವನದಲ್ಲಿ ಹೆಚ್ಚು ವಿಕಸಿತರಾಗುವುದಿಲ್ಲ. ಹಣದ ವಿಷಯದಲ್ಲಿ ಹೆಚ್ಚು ಖರ್ಚು ಮಾಡಲು ಇಚ್ಛಿಸುವುದಿಲ್ಲ. ಮಕ್ಕಳ ಸಂಪಾದನೆ ನಿಮಗೆ ಲಭಿಸುತ್ತದೆ. ಕೈಗೆ ಬಂದ ಅಧಿಕಾರ ಉಳಿಸಿಕೊಳ್ಳುವಿರಿ. ಶಾಂತಿ, ನೀತಿಗಳನ್ನು ಪಾಲಿಸುವಿರಿ. ನಿಮಗೆ ಸುಖ ಸಂಸಾರಕ್ಕೆ ಅಡ್ಡಿ-ಆತಂಕಗಳು ಇರಬಹುದು. ಯಾವಾಗಲೂ ದುಡಿಯುವ ಆಸೆ ಹೊಂದುವಿರಿ.