20 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 20

ಸಂಖ್ಯೆ – 20

ಈ ಸಂಖ್ಯಾ ಬಲದವರು ಸದಾಕಾಲವೂ ಸಂಚಾರಿ ಆಗುವರು. ವಿವಾಹ ಜೀವನದಲ್ಲಿ ಸುಖ ಇಲ್ಲ. ಬೇರೆ ಬೇರೆ ಸ್ಥಳಗಳಿಗೆ ಹೋಗಿ ಅಲ್ಲಿ ದುಡಿದು ಸಂಪಾದಿಸುವಿರಿ. ನಿಮ್ಮ ಹುಟ್ಟಿದ ಊರಿಗೆ ದೂರವಾಗಿಯೇ ಇರುತ್ತೀರಿ. ನಿಮ್ಮ ಹಿರಿಯರು ಊರು ಬಿಟ್ಟು ಬಂದಿರುವರು. ಸ್ತ್ರೀಯರ ಮೂಲಕ ತಂದೆ ಮಕ್ಕಳಲ್ಲಿ ವಿರಸ ಉಂಟಾಗುವುದು.
ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯುವ ಅವಕಾಶವಿದೆ. ದೊಡ್ಡ ದೊಡ್ಡ ಉದ್ಯೋಗಗಳಲ್ಲಿ ಸೇರುತ್ತೀರಿ. ತಂದೆಯ ಅಕ್ಕ ತಂಗಿಯರಲ್ಲಿ ಯಾರೊಬ್ಬರಾದರೂ ಕಷ್ಟದಿಂದ ಬಂದವರಾಗುವರು.