2 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 2
ಸಂಖ್ಯೆ – 2

ಈ ಸಂಖ್ಯೆಯವರು ಸ್ವತಂತ್ರರಾಗಿ ಬಾಳಲು ಇಷ್ಟ ಪಡುವಿರಿ. ಮನೆ ಆಸ್ತಿ ವಿಚಾರದಲ್ಲಿ ಹೆಚ್ಚು ಮುತುವರ್ಜಿವಹಿಸುತ್ತೀರಿ. ಒಂದೊಂದು ಸಲ ನೀವು ಎಲ್ಲರನ್ನು ತುಂಬು ಹೃದಯದಿಂದ ಪ್ರೀತಿಸುವಿರಿ. ಮೆದುವಾದ ಗುಣ. ಹೆಚ್ಚು ಕಠಿಣ ಕೆಲಸಗಳನ್ನು ಮಾಡಲು ಇಷ್ಟಪಡುವುದಿಲ್ಲ. ಏನೇ ಬದಲಾವಣೆ ಮಾಡಿಕೊಂಡರು ಅದು ಒಳ್ಳೆಯದಕ್ಕಾಗಿಯೇ ಇರುತ್ತದೆ. ಸ್ತ್ರೀಯರೊಂದಿಗೆ ಹೆಚ್ಚು ಬೆರೆಯುವಿರಿ.

ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಮೆ ಮಾಡುವಿರಿ. ಸದಾಕಾಲವೂ ಮನರಂಜನೆ,ಶುಭಕಾರ್ಯ,ವಿವಾಹಾದಿ ಸಮಾರಂಭಗಳಿಗೆ ಪ್ರಯಾಣಿಸುತ್ತಲೇ ಇರುತ್ತೀರಿ. ಜಲಪ್ರದೇಶವನ್ನು ಹೆಚ್ಚು ಆಕರ್ಷಿಸುವಿರಿ.

ಯಾವ ಕೆಲಸ ಮಾಡಿದರೂ ತುಂಬಾ ಹೃದಯದಿಂದ ಕೂಡಿ ಮಡುವಿರಲ್ಲದೆ ಒಂದೊಂದು ಸಲ ತ್ಯಾಗ ಬುದ್ಧಿ ಉಳ್ಳವರಾಗಿರುತ್ತೀರಿ.

ನಿಮ್ಮ ತಂದೆ – ತಾಯಿಗಳು ಒಳ್ಳೆಯ ವಂಶಸ್ಥರಾಗಿರುತ್ತಾರೆ. ತಾಯಿಯ ವಂಶವಂತು ದೈವೀಕ ಮತ್ತು ಶ್ರೀಮಂತಿಕೆಯಿಂದ ಕೂಡಿರುತ್ತದೆ. ಸದಾ ನೀವು ಗೃಹಕೃತ್ಯದ ಉದ್ಯೋಗದಲ್ಲಿ ಅಭಿರುಚಿ ಉಳ್ಳವರು. ವಿವಾಹನಂತರ ಭಾಗ್ಯಶಾಲಿಗಳು ಇತರರಿಗೆ ಸಹಾಯ ಮಾಡುವ ಧಾರಾಳಿಗಳು. ದಾನಿಗಳಾಗುವಿರಿ. ಇತರರಿಗೆ ಅಪತ್ಕಾಲದಲ್ಲಿ ಸಹಾಯ ಮಾಡುವ ಗುಣವಿದೆ. ಹಸಿದು ಬಂದವರಿಗೆ ಅನ್ನ – ಬಟ್ಟೆಕೊಟ್ಟು ಕಾಪಾಡುವಿರಿ.

ನಿಮಗೆ ವಾಹನ, ಆಭರಣಗಳ ಮೇಲೆ ಮೋಹ ಹೆಚ್ಚು. ಇದರಿಂದ ಸಾರ್ವಜನಿಕ ಸಂಬಂಧ ಹೆಚ್ಚಾಗಿ ಪ್ರೀತಿಸುವಿರಿ. ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯುವಿರಿ.