
19 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 19
ಸಂಖ್ಯೆ – 19
19ನೇ ನಕ್ಷತ್ರ ಉತ್ತರಾಷಾಢ 1ನೇ ಪಾದ ಧನಸ್ಸುರಾಶಿ ಇರುವುದು. ಯಾವಾಗಲೂ ತಿರುಗಾಟ, ಯಾವ ಕೆಲಸ ತನಗೆ ಕೊಟ್ಟರು ಅದನ್ನು ಧೈರ್ಯವಾಗಿ ಸಕ್ರಿಯವಾಗಿ ಮಾಡುವರು. ಆಟಪಾಠಗಳಲ್ಲಿ ಆಸಕ್ತಿ ಹೆಚ್ಚು ಮತ್ತು ಇವರು ಆಫೀಸಿನಲ್ಲಿ ಕೂತು ಕೆಲಸ ಮಾಡುವವರಲ್ಲ, ಗೌರವ ಕೆಲಸವನ್ನೇ ಹೊಂದುವರು. ಯಾವಾಗಲೂ ವಿವೇಚನಾತ್ಮಕ ವಾಗಿ ಕೆಲಸ ಮಾಡುವರು. ಸದಾ ಉತ್ಸಾಹಿಗಳಾಗಿರುವರು. ಇವರು ಸ್ಥಿರ ಮನಸ್ಸಿನವರಲ್ಲ ಚಂಚಲ ಬುದ್ಧಿ, ಸದಾ ಬದಲಾವಣೆ ಆಗುವಂತೆ ಯೋಚಿಸುವರು. ಇವರು ಮಾತನಾಡಿದರೆ ದ್ವಂದ್ವಾರ್ಥ ಇರುತ್ತದೆ. ಯಾವ ಕೆಲಸ ಮಾಡಿದರೂ ಅದು ಎರಡು ಎರಡು ಸಲ ಪ್ರಯತ್ನಿಸುವಂತಿರುತ್ತದೆ. ಒಂದೇ ಸಲ ಯಾವುದನ್ನು ಮಾಡಲಾರರು. ಜೀವನದಲ್ಲಿ ಇವರು ನಿಧಾನವಾಗಿ ಮುಂದುವರೆಯುವರು. ಯಾವಾಗಲೂ ಪ್ರಮುಖ ವಿಚಾರವಂತರಾಗಿ ಅಂತಹ ವಾತಾವರಣದಲ್ಲಿಯೇ ಉಳಿಯುವರು.