18 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 18

ಸಂಖ್ಯೆ – 18

ಜೀವನದಲ್ಲಿ ಒಂದು ನೆಲೆ ಕಾಣುವಿರಿ. ಯಾವುದಕ್ಕೂ ಹಿರಿಯರ ಅನುಗ್ರಹ ಇರಬೇಕು. ಇಲ್ಲದಿದ್ದರೆ ಉದ್ಯೋಗದಲ್ಲಿ ಹಿರಿಯರೇ ಶತ್ರುಗಳಾಗಿ ನಿಮ್ಮನ್ನು ತುಳಿಯುವರು.
ನೀವು ನಂಬಿಕೆ ತೋರಿಸಿ ಅವಮಾನ ಪಡುತ್ತೀರಿ. ಒಂದೊಂದು ಸಲ ನಿಮ್ಮ ತೀರ್ಮಾನವು ನಿಮ್ಮ ಅವಿವೇಕದ ಫಲದಿಂದ ತಿರುವು-ಮುರುವು ಆಗಬಹುದು.
ನಿಮಗೆ ಹಿರಿಯರ ಆಸ್ತಿ ಕೈ ಸೇರುವಾಗ ಶ್ರಮ ಪಡಬೇಕಾಗುವುದು. ಸಭ್ಯತೆಯಿಂದ ಪಡೆಯಲಾರಿರಿ.
ನಿಮ್ಮ ದುಡುಕಿನ ಫಲದಿಂದ ಉದ್ಯೋಗದಲ್ಲಿ ಕಿರುಕುಳ ಹೊಂದಿ, ಉದ್ಯೋಗ ಹೀನರಾಗುತ್ತೀರಿ. ಇದರಿಂದ ಪತ್ನಿ ಪುತ್ರರಿಗೂ ನೀವು ವಿರೋಧಿಗಳಾಗುತ್ತೀರಿ. ಸಂಸಾರದಲ್ಲಿ ಸುಖ, ಶಾಂತಿ, ನೆಮ್ಮದಿ ಇರಲಾರದು.