
17 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 17
ಸಂಖ್ಯೆ – 17
ಈ ಸಂಖ್ಯೆಯವರು ಧೈರ್ಯವಂತರು, ವಿಶ್ವಾಸ ಪ್ರಿಯರು, ಒಳ್ಳೆಯ ಗುಣವಂತರು, ಶ್ರೇಷ್ಠರು ಆಗಿರುವರು, ಇವರಿಗೆ ಜೀವನದಲ್ಲಿ ಉನ್ನತವಾದ ಆಸೆ ಇರುತ್ತದೆ.
ಆದರೆ ಇವರಿಗೆ ಜೀವನದಲ್ಲಿ ಏನೋ ನೋವು ಕಾಣುತ್ತದೆ. ಇವರು ಮಾಂತ್ರಿಕರ ಸಹವಾಸ ಮಾಡಿ ತಮ್ಮ ಭವಿಷ್ಯವನ್ನು ಮಣ್ಣುಪಾಲು ಮಾಡಿಕೊಳ್ಳುವರು.
ಇವರಿಗೆ ವಿವಾಹ ವಿಷಯದಲ್ಲಿ ಮುಂದುವರೆದು ಭಗ್ನ ಜೀವನವನ್ನು ಅನುಭವಿಸುವ ಯೋಗವಿದೆ.
ಇವರು ವಿದ್ಯೆಯಲ್ಲಾಗಲಿ, ಬುದ್ಧಿಯಲ್ಲಾಗಲಿ, ಯಾರಿಗೂ ಕಡಿಮೆ ಇಲ್ಲ. ಪಂಡಿತರಾಗಿರುತ್ತಾರೆ. ಇವರಿಗೆ ವಿದ್ಯಾವಂತರ ಸ್ನೇಹ ಹೆಚ್ಚಾಗಿರುತ್ತದೆ.
ಇವರು ವಿದ್ಯೆಯಲ್ಲಿ ಪರಿಣಿತರು, ಆಳವಾದ ವಿದ್ಯಾಭ್ಯಾಸ ಮಾಡುದವರೂ ಆಗಿರುತ್ತಾರೆ. ಇವರು ಚೈತನ್ಯಶಾಲಿಗಳು. ನಮ್ಮ ಪಾಲಿಗೆ ಬಂದ ಅಧಿಕಾರವನ್ನು ಸಕ್ರಮಗೊಳಿಸಿ ಅದರ ಪ್ರಭಾವದಿಂದ ತವೊಬ್ಬ ಉತ್ತಮ ನಾಯಕರೆಂದು ತೋರ್ಪಡಿಸಿಕೊಳ್ಳುವರು.