16 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 16

ಸಂಖ್ಯೆ – 16

ಇವರು ಅತಿ ಬುದ್ಧಿವಂತರಾಗಿ ತಮ್ಮ ಭವಿಷ್ಯದ ತೊಂದರೆಯಿಂದಲೇ ತಲೆಬಾಗಿಸುವರು.
ಆದರೆ ಇವರು ಬಹಳ ಸೂಕ್ಷ್ಮವಂತರು, ಎಲ್ಲರನ್ನು ಪ್ರೀತಿಸುವರು, ತಕ್ಷಣ ಎಲ್ಲವನ್ನೂ ತ್ಯಜಿಸುವರು. ಆದ್ದರಿಂದ ಇವರಿಗೆ ಕ್ಷಣಕ್ಷಣಕ್ಕೂ ಕೋಪ ಹೆಚ್ಚಾಗಿರುತ್ತದೆ.
ಆದರೆ ಯಾವ ಹಂಗಿನಲ್ಲೂ ಜೀವಿಸಲು ಇಷ್ಟಪಡುವುದಿಲ್ಲ. ಸ್ವತಂತ್ರರಾಗಿ ಜೀವಿಸಿದರೂ ಆತ್ಮಗೌರವ ಉಳಿಸಿಕೊಳ್ಳುವ ಪ್ರವೃತ್ತಿಯುಳ್ಳವರು.
ಒಳ್ಳೆಯ ಗುಣ, ನಡತೆ ಹೊಂದಿರುತ್ತಾರೆ. ಆದರೆ ತಮ್ಮದೇ ಆದ ಅಹಂಕಾರದಿಂದ ಮೆರೆಯುವರು. ಇದರಿಂದ ಇತರರ ಅಸೂಯೆಗೆ ಕಾರಣರಾಗಿ ಪರಿಸ್ಥಿತಿ ಕೆಡಿಸಿಕೊಳ್ಳುತ್ತಾರೆ.
ಇವರಿಗೆ ಯಾವುದರಲ್ಲೂ ಹೆಚ್ಚಿನ ನಂಬಿಕೆ, ವಿಶ್ವಾಸ, ಪ್ರೀತಿ ಗಳಿರುವುದಿಲ್ಲ. ಇವರು ಸಾರ್ವಜನಿಕ ಕ್ಷೇತ್ರದಲ್ಲಿ ಹೆಚ್ಚಾಗಿ ದುಡಿಯುವರು. ಪ್ರಕೃತಿಗೆ ಅಂಟಿಕೊಳ್ಳುವರು. ಎಲ್ಲರನ್ನೂ ಆಕರ್ಷಿಸಿ ಒಳ್ಳೆಯ ವ್ಯಕ್ತಿ ಎಂಬ ಪಾತ್ರಕ್ಕೆ ಗುರಿಯಾಗುವರು.
ಇವರಿಗೆ ಒಳ್ಳೆಯ ಪತ್ನಿ-ಪುತ್ರರಿರುತ್ತಾರೆ. ಆದರೆ ವಿವಾಹ ಜೀವನದಲ್ಲಿ ಹೆಚ್ಚು ಸುಖ ಇಲ್ಲದವರು. ಸಂಸಾರ ನಡೆಸಲು ಇವರು ಬೇರೆಯಾಗಿಯೇ ಹೋಗುತ್ತಾರೆ. ಇದರಿಂದ ಕಷ್ಟಪಟ್ಟು ಜೀವನ ನಡೆಸುತ್ತಾರೆ.