13 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 13

ಸಂಖ್ಯೆ – 13

ವಿದ್ಯಾವಂತರು, ಬುದ್ಧಿವಂತರು, ಸದಾಕಾಲ ದುಡಿಯುವವರು, ಭಾತ್ರಗಳು ಅಭಿವೃದ್ಧಿ ಹೊಂದುವರು. ವ್ಯಾಪಾರ ಮಾಡುವ ಚಿಂತೆ. ಆದರೆ, ಸ್ವತಂತ್ರರಲ್ಲ.
ಯಾವ ವಿಷಯವನ್ನಾದರೂ ನಿಧಾನವಾಗಿ ಯೋಚಿಸಿ ಅದರ ಒಳಿತು-ಕೆಡುಕುಗಳನ್ನು ತಿಳಿದು ಅದರಂತೆ ಪ್ರಯತ್ನಿಸುತ್ತೀರಿ. ನೀವು ಒಂದೊಂದುಸಲ ಮಂಕು ಕವಿದಂತೆ ಇರುತ್ತೀರಿ.
ಒಂದೊಂದು ಸಲ ಸೋಮಾರಿಗಳಾಗುವಿರಿ. ವ್ಯಾಪಾರ, ಭೂಮಿ, ಮನೆ, ಆಸ್ತಿ ಪಡೆಯುತ್ತೀರಿ.
ಒಂದೊಂದು ಸಲ ಸ್ವಯಂಕೃತ ಅಪರಾಧ ಮಾಡಿ ಅವಮಾನಿತರಾಗುತ್ತೀರಿ. ಬಂಧುಗಳಲ್ಲಿ ಸದಾ ಜಗಳ ಇರುತ್ತದೆ.
ರಾಜಕೀಯದಲ್ಲಿ ಸರ್ಕಾರದ ಒತ್ತಡ ನಿಮಗೆ ಬರುವುದು. ವಿದೇಶಿ ಕಂಪನಿಗಳ ಜೊತೆ ಶಾಮೀಲಾಗುತ್ತೀರಿ.
ಯಾವ ವಿಚಾರದಲ್ಲೂ ದೀರ್ಘ ಅಲೋಚನೆ ಮಾಡುವುದರಿಂದ ಸಮಯಕ್ಕೆ ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳುತ್ತೀರಿ.