
12 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 12
ಸಂಖ್ಯೆ – 12
ಈ ಸಂಖ್ಯೆಯು ನ್ಯಾಯ, ಧರ್ಮನೀತಿ, ಸಂಹಿತೆಗಳನ್ನು ಚೆನ್ನಾಗಿ ಪಾಲಿಸುವಿರಿ. ಸಾಮಾನ್ಯವಾಗಿ ದೇವಿ ಸಂಬಂಧ ವಿಚಾರವಾಗಿ ವೇದಾಂತಿ ಆಗುತ್ತೀರಿ. ಯಾವಾಗಲು ವಿಶೇಷ ವಿದ್ಯೆಯನ್ನು ಕಲಿಯುವ ಆಸೆ, ಸ್ತ್ರೀ ಸಂತಾನ ಹೆಚ್ಚು. ಯಾವ ಕಾರ್ಯ ಮಾಡಿದರು ಶ್ರದ್ದೆ ವಹಿಸುವಿರಿ. ಸ್ತ್ರೀಯರ ಮೂಲಕ ಅದೃಷ್ಟ ಬರಬಹುದು. ಒಳ್ಳೆಯ ವಂಶದ ಹೆಣ್ಣು ದೊರೆಯುವುದು. ಮಕ್ಕಳು ಭಾಗ್ಯವಂತರಾಗಬಹುದು. ನಿಮ್ಮ ಸಾತ್ವಿಕ ಗುಣದಿಂದ ಎಲ್ಲರನ್ನು ಆಕರ್ಷಿಸುವಿರಿ. ಹಣವನ್ನು ಪೋಲು ಮಾಡುವವರಲ್ಲ. ಹೊಸ ಹೊಸ ಜನರ ಪರಿಚಯ ನಿಮಗೆ ಆಗುವುದು. ವಿದೇಶಿ ಬಂಡವಾಳ ಕೂಡಿ ಹಾಕುವಿರಿ.
ಆದರೆ ಇತರರಿಗೆ ಸಹಾಯ ಮಾಡುವಾಗ ಎಚ್ಚರವಾಗಿರಬೇಕು. ಎಲ್ಲರ ಮೇಲೂ ಅಧಿಕಾರ ಚಲಾಯಿಸುವ ಗುಣ ನಿಮ್ಮದು. ಸಾಮಾನ್ಯವಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಹೆಚ್ಚಿನ ಸಂಪರ್ಕ ಹೊಂದಿರುತ್ತೀರಿ. ಪ್ರೇಮ ವಿವಾಹ ಆಗಬಾರದು.