
11 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 11
ಸಂಖ್ಯೆ – 11
ಈ ಸಂಖ್ಯಾ ಬಲಕ್ಕೆ ತಂದೆಯು ಪ್ರಾಬಲ್ಯವಂತರು. ಸರ್ಕಾರದ ಎಲ್ಲಾ ಕೆಲಸಗಳು ಸರಾಗವಾಗಿ ಆಗುವುವು. ಮಾತೃ ವಂಶಕ್ಕಿಂತಲೂ ಪಿತೃ ವಂಶವು ಶ್ರೇಷ್ಠ ಎನಿಸುವುದು. ಸಣ್ಣಪುಟ್ಟ ಕೆಲಸಗಳನ್ನು ಯಶಸ್ವಿಯಾಗಿ ಮಾಡುವರು. ಸಾರ್ವಜನಿಕರ ಸಂಬಂಧ ಹೆಚ್ಚಾಗಿರುತ್ತದೆ. ಅಧಿಕಾರದಲ್ಲಿ ಎಂತಹ ಅಡ್ಡಿ-ಆತಂಕ ಬಂದರು ಎದುರಿಸುವರು. ನ್ಯಾಯ – ಧರ್ಮ – ನೀತಿಗಳನ್ನು ಎತ್ತಿಹಿಡಿಯುವರು.
ಉದ್ಯೋಗದಲ್ಲಿ ಸ್ವಯಂ ಪ್ರತಿಭೆ ತೋರಿಸಿ ಪ್ರಮೋಷನ್ ಪಡೆಯುತ್ತೀರಿ. ಜೀವನದಲ್ಲಿ ಉದ್ಯೋಗದ ಸಲುವಾಗಿ ಅಥವಾ ತಂದೆಯ ಮನೆಯ ಸಲುವಾಗಿ ಆಗಾಗ ಪ್ರಯಾಣಗಳು ಇರುತ್ತದೆ.
ನೀವು ವಿಚಾರವಂತರು, ವೇದಾಂತಿಗಳು, ಅನೇಕ ತರಹದ ವಿದ್ಯೆಗಳನ್ನು ಕಲಿಯುವಿರಿ. ನಿಮಗೆ ಸ್ವಂತ ದುಡಿಮೆಗಿಂತಲೂ ಉದ್ಯೋಗವೇ ಲೇಸು.