
10 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 10
ಸಂಖ್ಯೆ – 10
10ನೇ ನಕ್ಷತ್ರ ಉತ್ತರ 1ನೇ ಪಾದ ಸಿಂಹದಲ್ಲಿರುವುದು. ಇದರಿಂದ ಇವರು ಎಲ್ಲರನ್ನೂ ತನ್ನಂತೆ ನಡೆದುಕೊಳ್ಳುವ ರೀತಿಯಲ್ಲಿ ಆಕರ್ಷಣೆ ಮಾಡುವರು. ಆತ್ಮವಿಶ್ವಾಸಿಗಳು. ಕ್ರಿಯಾ ಶೀಲವಾದ ವ್ಯಕ್ತಿಗಳು. ಯಾವಾಗಲೂ ಹೊಸ ಹೊಸ ವಿಚಾರವನ್ನು ಹುಡುಕುವರು. ತಮಗೆ ನಂಬಿಕೆ ಬಂದರೆ ಎಷ್ಟೇ ಕಷ್ಟವಾಗಲಿ ಅದನ್ನು ಸಾಧಿಸದೆ ಬಿಡಲಾರರು. ಇವರು ದೊಡ್ಡ ದೊಡ್ಡ ಸಂಘ-ಸಂಸ್ಥೆಗಳನ್ನು ಕಟ್ಟುವರು. ದೇಶಕ್ಕಾಗಿ ದುಡಿಯುವರು. ಯಾವಾಗಲೂ ಅಧಿಕಾರದ ಲಾಲಸೆಯಲ್ಲಿ ಇರುವರು. ಯಾರ ಸಹಾಯವೂ ಇಲ್ಲದೆ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುವರು. ತಮ್ಮನ್ನು ನಂಬಿದವರಿಗೆ, ಅಧಿಕಾರ ಕೊಡಿಸಲು, ಕಾಪಾಡಲು ಹಿಂಜರಿಯುವುದಿಲ್ಲ.
10ನೇ ಸಂಖ್ಯೆಯಲ್ಲಿ ಜನಿಸಿದವರು 21 ರಿಂದ 24 ನೇ ವರ್ಷದಲ್ಲಿ ಬಹಳ ದುಃಖ ಹೊಂದಿ, ವ್ಯವಹಾರ ಕಳೆದುಕೊಂಡು ವೃತ್ತ ತಿರುಗಾಟದಲ್ಲಿ ಇರುತ್ತೀರಿ. 31 ರಿಂದ 40 ನೇ ವರ್ಷದಲ್ಲಿ ಸಂಸಾರದಲ್ಲಿ ಏನೋ ದುಃಖ ಇದೆ.