Numerology for date of birth 1

1 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 1
ಸಂಖ್ಯೆ 1


1ನೇ ಕೃತಿಕ ಪಾದವು ಮೇಷದಲ್ಲಿರುವುದು. ಈ ಸಂಖ್ಯೆಯ ಜಾತಕದವರು ಧೈರ್ಯದಿಂದ ಮುಂದುವರೆದು ರಾಜಕೀಯ ನಾಯಕರಾಗುವರು. ಹಲವಾರು ಸಂಘ ಸಂಸ್ಥೆ, ದೇಶಗಳ ನಾಯಕರು ಆಗುತ್ತಾರೆ. ಪ್ರತಿಯೊಂದು ವಿಚಾರದಲ್ಲೂ ಆಲೋಚನಾಪರರು. ಯಾವಾಗಲೂ ಮುನ್ನುಗ್ಗುವ ಸ್ವಭಾವದವರು. ಆತುರಪಡುವವರಲ್ಲ. ಛಲವಾದಿಗಳು. ಅಧಿಕಾರದ ಚೌಕಟ್ಟಿನಲ್ಲಿ ನಡೆಯುವರು. ಒಂದೊಂದು ಸಲ ಇತರರು ಕೊಡುವ ಕಿರುಕುಳಕ್ಕೆ ಇವರು ಮಣಿಯದೆ ಕ್ರೂರವಾಗಿ ವರ್ತಿಸುವರು. ಕೆಲವು ಸಲ ದುಡುಕಿನ ಸ್ವಭಾವದವರೂ ಆಗುವರು.